Winter Morning: ಚಳಿಯಿದ್ದರೇನಂತೆ, ಬೆಳಗ್ಗೆ ಬೇಗನೆ ಏಳುವುದರಿಂದ ಏನೆಲ್ಲ ಲಾಭಗಳಿವೆ ಗೊತ್ತೇ?

 ಚಳಿಗಾಲವೆಂದು ಬೆಚ್ಚಗೆ ಮುದುಡಿ (winter morning) ಮಲಗುವುದಕ್ಕಿಂತ, ಬೇಗನೆ ಎದ್ದು ನಿತ್ಯದ ಚಟುವಟಿಕೆಗಳಲ್ಲಿ ತೊಡಗುವುದರಿಂದ ಆಗುವ ಆರೋಗ್ಯದ ಲಾಭಗಳನ್ನು (Health tips) ಇಲ್ಲಿ ನೋಡೋಣ ಬನ್ನಿ.


ಬೇಗ ಬೆಳಗ್ಗೆ ಏಳುವುದು ಅದರಲ್ಲೂ ಚಳಿಗಾಲದಲ್ಲಿ (Winter Morning) ಎಷ್ಟು ಕಷ್ಟ ಎಂಬುದನ್ನು ವಿವರಿಸಿ ಹೇಳಬೇಕಾಗಿಲ್ಲ. ನಿತ್ಯವೂ ಒಂದೇ ಸಮಯಕ್ಕೆ ಚೆನ್ನಾಗಿ ಹೊದ್ದು ಮಲಗಿದಲ್ಲಿಂದ ಸೋಮಾರಿತನ (Laziness) ಬಿಟ್ಟೇಳುವುದು ಎಂದರೆ, ಅದು ಸುಲಭದ ಮಾತಲ್ಲ. ಅದಕ್ಕೆ ಸಾಕಷ್ಟು ಮಾನಸಿಕ ತಯಾರಿ ಬೇಕು. ಮನಸ್ಸು ಬುದ್ಧಿಯ ಮಾತು ಇಲ್ಲಿ ಕೇಳದು. ಬುದ್ಧಿ ಬೇಗ ಏಳು ಎಂದರೆ, ಮನಸ್ಸು ಮಾತ್ರ ಹಾಸಿಗೆಯಲ್ಲಿ ಬೆಚ್ಚಗೆ ಮುದುಡಿ ಮಲಗುವ ಕನಸು ಕಾಣುತ್ತದೆ. ಬುದ್ಧಿ ಮನಸ್ಸಿನೆದುರು ಸೋಲುತ್ತದೆ. ಹೀಗಾಗಿ, ಚಳಿಗಾಲದಲ್ಲಿ ಚೆನ್ನಾಗಿ ತಿಂದುಂಡು ಮಲಗಿ ಎದ್ದು, ಸೋಮಾರಿತನ ಮೈಗೂಡಿಸಿಕೊಂಡು ಆರಾಮವಾಗಿದ್ದುಕೊಂಡು ಮೈತುಂಬಿಸಿಕೊಂಡು ತೂಕ ಹೆಚ್ಚಿಸಿಕೊಳ್ಳುವವರೇ (Weight gain) ಜಾಸ್ತಿ. ಹೀಗಿದ್ದಾಗ ಬೇಗ ಏಳುವ ಬಗ್ಗೆ ಕೊಡುವ ಪ್ರವಚನವನ್ನು ಕೇಳುವವರ್ಯಾರು ಅಲ್ಲವೇ? ಅನಿವಾರ್ಯವಾಗಿ ಆಫೀಸಿಗೆ ಒಂದೇ ಸಮಯಕ್ಕೆ ಬೇಗ ಎದ್ದು ಹೊರಡಬೇಕಾಗುವವರು, ಶಾಲೆಗೆ ಸಮಯಕ್ಕೆ ಸರಿಯಾಗಿ ಮಕ್ಕಳನ್ನು ತಲುಪಿಸುವ ಜವಾಬ್ದಾರಿಯನ್ನು ಹೊತ್ತ ತಾಯಂದಿರು ಹೀಗೆ ಅನೇಕ ಜವಾಬ್ದಾರಿಗಳ ಮಂದಿ ಖಂಡಿತವಾಗಿಯೂ ಕಷ್ಟಪಟ್ಟಾದರೂ ಏಳುವವರೇ. ಯಾಕೆಂದರೆ ಮಾಡದೆ ವಿಧಿಯಿಲ್ಲ. ಆದರೆ, ಇವೆಲ್ಲ ಒತ್ತಡವನ್ನೂ ಮೀರಿ, ಬೆಳಗ್ಗೆ ಬೇಗನೆ ಏಳುವ (Early wake up) ಅಭ್ಯಾಸವನ್ನು ಮಾಡಿಕೊಂಡಿರುತ್ತಾರೆ. ಅವರ ಶಿಸ್ತುಬದ್ಧ ಜೀವನವನ್ನು ನೋಡಿಯಾದರೂ, ಬೆಳಗ್ಗೆ ಬೇಗನೆ ಏಳುವುದರಿಂದ ಏನೆಲ್ಲ ಲಾಭಗಳಿವೆ ಎಂಬುದನ್ನು ಕಂಡುಕೊಳ್ಳಬೇಕು. ಬನ್ನಿ, ಬೆಳಗ್ಗೆ ಬೇಗನೆ ಏಳುವುದರಿಂದ ಏನೆಲ್ಲ ಲಾಭಗಳಿವೆ (health tips) ಎಂಬುದನ್ನು ನೋಡೋಣ.

1. ಬೆಳಗ್ಗೆ ಬೇಗನೆದ್ದು ವ್ಯಾಯಾಮ ಮಾಡುವುದು ಯಾವಾಗಲೂ ಸಂಜೆಯ ವ್ಯಾಯಾಮಗಳಿಗಿಂತ ಸೂಕ್ತ. ದೇಹಕ್ಕೆ ಎದ್ದ ಕೂಡಲೇ ವ್ಯಾಯಾಮದ ಅಗತ್ಯವಿದೆ. ಆದರೆ, ಸಂಜೆಯ ಹೊತ್ತು ದೇಹವನ್ನು ನಿಧಾನವಾಗಿ ಶಾಂತತೆಗೆ ಕೊಂಡೊಯ್ಯುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು. ಅಂದರೆ, ಬೆಳಗ್ಗಿನಿಂದ ಸಂಜೆಯವರೆಗೆ ಕೆಲಸಗಳನ್ನು ಮಾಡಿ, ಕೊನೆಗೆ ನಿಧಾನವಾಗಿ ಕೆಲಸಗಳನ್ನು ಕಡಿಮೆಗೊಳಿಸುತ್ತಾ ನಿದ್ದೆಗೆ ಜಾರುವುದು ಒಳ್ಳೆಯ ಕ್ರಮ. ಎಲ್ಲ ಕೆಲಸಗಳ ನಂತರ ದೇಹವನ್ನು ಮತ್ತೆ ಸಂಜೆಯ ಮೇಲೆ ದಂಡಿಸುವುದು ಹಿತಕರವಲ್ಲ. ಆಯುರ್ವೇದವೂ ಇದನ್ನೇ ಪುಷ್ಠೀಕರಿಸುತ್ತದೆ. ಹೀಗಾಗಿ, ಬೆಳಗ್ಗೆ ಬೇಗನೆ ಎದ್ದರೆ ವ್ಯಾಯಾಮಕ್ಕೆ ಸಮಯ ದೊರೆಯುತ್ತದೆ. ಕನಿಷ್ಟ ಅರ್ಧ ಗಂಟೆಯಾದರೂ ವ್ಯಾಯಾಮಕ್ಕೆ ಸಮಯ ನೀಡುವುದು ಒಳ್ಳೆಯದು.

2. ಬೆಳಗ್ಗೆ ಬೇಗನೆ ಏಳುವುದರಿಂದ ಮಾನಸಿಕವಾಗಿ ಸದೃಢರಾಗುತ್ತೇವೆ. ಬೆಳಗ್ಗೆ ಬೇಗನೆದ್ದು, ಹೊರಗೆ ಪ್ರಕೃತಿಯ ನಡುವೆ ಒಂದು ವಾಕ್‌ ಹೋಗಿ ಬಂದರೆ ಮನಸ್ಸು ಉಲ್ಲಸಿತವಾಗುತ್ತದೆ. ಇದರಿಂದ ವೃತ್ತಿ ಸಂಬಂಧಿತವಾದ ಒತ್ತಡ ಸಮಸ್ಯೆಗಳೂ ಬರದು. ಮಾನಸಿಕವಾಗಿ ಸಾಮರ್ಥ್ಯ ಹೆಚ್ಚಾಗುತ್ತದೆ. ಮನಸ್ಸಿಗೆ ಸುಖ, ನೆಮ್ಮದಿ ಕೂಡಿ ಬರುತ್ತದೆ.

3. ಕೆಲಸ ಕಾರ್ಯಗಳಲ್ಲಿ ಚುರುಕುತನ ಬರುತ್ತದೆ. ಬೇಗನೆದ್ದು ವ್ಯಾಯಾಮ ಮಾಡಿಕೊಂಡು ಕಚೇರಿ ಕೆಲಸಗಳನ್ನು ಒಂದು ಸಮಯಕ್ಕೆ ಸರಿಯಾಗಿ ಆರಂಭಿಸುವಾಗ, ಮನಸ್ಸು, ಬುದ್ಧಿ ಚುರುಕಾಗಿ ಕೆಲಸದ ಸಾಮರ್ಥ್ಯವೂ ಹೆಚ್ಚಾಗುತ್ತದೆ. ಕೆಲಸದಲ್ಲಿ ಲವಲವಿಕೆಯೂ ಇರುತ್ತದೆ.


4. ಕೆಲಸ ಕಾರ್ಯಗಳಲ್ಲಿ ಫೋಕಸ್‌ ಹೆಚ್ಚುತ್ತದೆ. ನಿತ್ಯವೂ ತಾನೇನು ಕೆಲಸಗಳನ್ನು ಇಂದು ಮಾಡಿ ಮುಗಿಸಬೇಕು ಎಂಬುದರ ಬಗ್ಗೆ ಪಕ್ವತೆ, ನಿರ್ಧಿಷ್ಟತೆ ಇರುತ್ತದೆ. ಹಾಗೂ ಅಂದುಕೊಂಡ ಹಾಗೆ ಕೆಲಸಗಳನ್ನು ಮಾಡಿ ಮುಗಿಸುತ್ತೀರಿ ಕೂಡಾ.

ಸಂಪೂರ್ಣ ಸುದ್ದಿಗಾಗಿ/ಮಾಹಿತಿಗಾಗಿ, ಈ ಲಿಂಕ್ ಅನ್ನು ಕ್ಲಿಕ್ ಮಾಡಿ 👉 Winter morning

ಇಂತಹ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 👉 Kannada Health Tips

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Healthy Food: ಈ ಎಲ್ಲ ರಾಸಾಯನಿಕಗಳು ನೀವು ತಿನ್ನುವ ಆಹಾರದಲ್ಲಿದೆಯೇ? ಹಾಗಾದರೆ ಎಚ್ಚರ!

Eating Food Packed In Newspaper: ನಿತ್ಯವೂ ದಿನಪತ್ರಿಕೆಯಲ್ಲಿ ಬಜ್ಜಿ ಬೋಂಡಾ ತಿನ್ನುತ್ತೀರಾ?; ಹಾಗಾದರೆ ಎಚ್ಚರ!

Benefits Of Tamarind: ಬಾಯಲ್ಲಿ ನೀರೂರಿಸುವ ಹುಣಸೆ ಹಣ್ಣಿನ ಲಾಭಗಳು ಗೊತ್ತೇ?