Guava Benefits: ಸೀಬೆ ಹಣ್ಣು ಎಂಬ ʻಸೂಪರ್ ಫುಡ್ʼ; ಇದು ಔಷಧೀಯ ಗುಣಗಳ ಕಣಜ!
ಸೀಬೇಹಣ್ಣಿನಲ್ಲಿರುವಷ್ಟು ಔಷಧೀಯ ಗುಣಗಳು (guava benefits) ಬೇರಾವ ಹಣ್ಣುಗಳಲ್ಲೂ ಸಿಗಲಿಕ್ಕಿಲ್ಲ. ಈ ಹಣ್ಣಿನಲ್ಲಿ ಎಲ್ಲ ಬಗೆಯ ರೋಗಗಳಿಗೂ ಉತ್ತರವಿದೆ. ಜೊತೆಗೆ ಬ್ಯಾಕ್ಟೀರಿಯಾಗಳನ್ನು ದೇಹದಿಂದ ಹೊರಗಟ್ಟುವ ಸಾಮರ್ಥ್ಯವಿದೆ.
ಪೇರಳೆ ಅಥವಾ ಸೀಬೇಹಣ್ಣು ಅಥವಾ ಚೇಪೇಕಾಯಿ ʻಹಣ್ಣುಗಳ ರಾಣಿʼ ಎಂಬುದು ನಿಮಗೆ ಗೊತ್ತೇ? ಹೌದು. ಸೀಬೇಹಣ್ಣಿನಲ್ಲಿರುವಷ್ಟು ಔಷಧೀಯ ಗುಣಗಳು ಬೇರಾವ ಹಣ್ಣುಗಳಲ್ಲೂ ಸಿಗಲಿಕ್ಕಿಲ್ಲ. ಈ ಹಣ್ಣಿನಲ್ಲಿ ಎಲ್ಲ ಬಗೆಯ ರೋಗಗಳಿಗೂ ಉತ್ತರವಿದೆ. ಜೊತೆಗೆ ಬ್ಯಾಕ್ಟೀರಿಯಾಗಳನ್ನು ದೇಹದಿಂದ ಹೊರಗಟ್ಟುವ ಸಾಮರ್ಥ್ಯವಿದೆ. ಇದರಲ್ಲಿರುವ ಪೋಷಕಾಂಶಗಳಿಗೆ, ಉರಿಯೂತಗಳು, ಋತುಗಳಿಗನುಸಾರವಾಗಿ ವಕ್ಕರಿಸುವ ಸಾಮಾನ್ಯ ರೋಗಗಳನ್ನು (guava benefits) ಬಡಿದಟ್ಟುವ ಗುಣವಿದೆ. ಅಷ್ಟೇ ಅಲ್ಲ, ಜೀರ್ಣಕ್ರಿಯೆ, ಹೃದಯದ ಆರೋಗ್ಯ, ಮಧುಮೇಹ ಹೀಗೆ ಹಲವು ಸಮಸ್ಯೆಗಳಿಗೆ ಪರಿಹಾರವಿದೆ. ಅದಕ್ಕೇ ಸೀಬೆ ಹಣ್ಣುಗಳ ರಾಣಿ!
ಮಧುಮೇಹಿಗಳಿಗೆ ಒಳ್ಳೆಯದು
ಸೀಬೆಯ ಚಿಗುರೆಲೆಗಳ ಸೇವನೆ ಮಧುಮೇಹಿಗಳಿಗೆ ಬಹಳ ಒಳ್ಳೆಯದು. ಇದು ರಕ್ತದಲ್ಲಿರುವ ಸಕ್ಕರೆಯ ಅಂಶವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇನ್ಸುಲಿನ್ ಮಟ್ಟದಲ್ಲಿ ಏರುಪೇರು ಸಮಸ್ಯೆ ಇರುವ ಮಂದಿಗೂ ಇದು ಬಹಳ ಒಳ್ಳೆಯದು. ನಿತ್ಯವೂ ಪೇರಳೆಯ ಚಿಗುರೆಲೆ ಚಹಾ ಮಾಡಿ ಕುಡಿದರೆ, ಮಧುಮೇಹಿಗಳು ಫಲಿತಾಂಶ ಕಾಣಬಹುದು.
ಸಂಪೂರ್ಣ ಸುದ್ದಿಗಾಗಿ/ಮಾಹಿತಿಗಾಗಿ, ಈ ಲಿಂಕ್ ಅನ್ನು ಕ್ಲಿಕ್ ಮಾಡಿ 👉 Kannada Health Tips
ಇಂತಹ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 👉 ಆರೋಗ್ಯ



ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ