Guava For Weight Loss: ತೂಕ ಇಳಿಸಬೇಕೆ? ಪೇರಲೆ ಹಣ್ಣು ತಿನ್ನಿ!

 ಮಿಡಿಗಾಯಿ, ಎಳೆಗಾಯಿ, ದೋರಗಾಯಿ, ಅರೆಹಂಪು, ಕಳಿತ ಹಣ್ಣು ಮುಂತಾದ ಯಾವುದನ್ನೂ ಬಿಡದಂತೆ ಪೇರಲೆ ಹಣ್ಣು ತಿನ್ನುವವರಿದ್ದಾರೆ. ತಿನ್ನಲು ಬಾಯಿಗೆ ರುಚಿ, ಮನಸ್ಸಿಗೆ ತೃಪ್ತಿ ಎನ್ನುವುದನ್ನು ಮೀರಿ ಬೇರೆ ಕಾರಣಗಳುಂಟೆ ಪೇರಲೆ ತಿನ್ನುವುದಕ್ಕೆ? ಇದನ್ನು ತಿಂದು (Guava for Weight Loss) ತೂಕ ಇಳಿಸಬಹುದೇ?



ಸೀಬೆ ಕಾಯಿ, ಪೇರಲೆ ಕಾಯಿ, ಚೇಪೆ ಕಾಯಿ (Guava for Weight Loss) ಮುಂತಾದ ಹಲವು ಹೆಸರುಗಳಿಂದ ಕರೆಸಿಕೊಳ್ಳುವ ಈ ಕಾಯಿ ಮತ್ತು ಹಣ್ಣು ಯಾರಿಗೆ ಇಷ್ಟವಿಲ್ಲ? ಅದರಲ್ಲೂ ಆಚೀಚೆ ಮನೆಗಳಲ್ಲಿ ಇದರ ಮರವಿದ್ದರೆ, ಅವರೆಷ್ಟೇ ಕರೆದು ಕೊಟ್ಟರೂ ಕದ್ದು ತಿಂದಿದ್ದು ಇನ್ನೂ ರುಚಿ! ಮಿಡಿಗಾಯಿ, ಎಳೆಗಾಯಿ, ದೋರಗಾಯಿ, ಅರೆಹಂಪು, ಕಳಿತ ಹಣ್ಣು- ಹೀಗೆ ಯಾವುದನ್ನೂ ಬಿಡದೆ ಬೋಳಿಸಿ ತಿನ್ನುವವರಿದ್ದಾರೆ. ತಿನ್ನಲು ಬಾಯಿಗೆ ರುಚಿ, ಮನಸ್ಸಿಗೆ ತೃಪ್ತಿ ಎನ್ನುವುದನ್ನು ಮೀರಿ ಬೇರೆ ಕಾರಣಗಳುಂಟೆ ಪೇರಲೆಕಾಯಿ ತಿನ್ನುವುದಕ್ಕೆ?



ಪೇರಲೆಕಾಯಿ ತೂಕ ಇಳಿಸುವವರಿಗೆ ಅವಶ್ಯವಾಗಿ ಬೇಕಾದ್ದು ಎಂದರೆ ಬಹಳಷ್ಟು ಜನರಿಗೆ ಖುಷಿಯಾದೀತು. ಹೌದು ತೂಕ ಇಳಿಸುವವರಿಗೆ ಅಗತ್ಯವಾಗಿ ಬೇಕಾದ್ದು ಪೌಷ್ಟಿಕ ಆಹಾರ ಮತ್ತು ಆ ಆಹಾರವನ್ನು ಎಷ್ಟು ಪ್ರಮಾಣದಲ್ಲಿ ತಿನ್ನಬೇಕು ಎಂಬ ಅರಿವು. ಹಸಿವಾದಾಗ ಸುಲಭಕ್ಕೆ ಪ್ಯಾಕ್‌ ಕತ್ತರಿಸಿ ಕರಂಕುರುಂ ಮೆಲ್ಲುವುದರ ಬದಲಿಗೆ ಆರೋಗ್ಯಕರ ತಿನಿಸುಗಳನ್ನು ಅಗತ್ಯವಿದ್ದಷ್ಟೇ ಪ್ರಮಾಣದಲ್ಲಿ ತಿನ್ನಬೇಕು. ಇಂಥ ಸಂದರ್ಭಗಳಲ್ಲಿ ಉಪಯೋಗಕ್ಕೆ ಬರುವುದು ಸೀಬೆ ಕಾಯಿ.




ಕ್ಯಾಲರಿ ಕಡಿಮೆ

ದೇಹಕ್ಕೆ ಅಗತ್ಯವಾದ ಶಕ್ತಿಯನ್ನು ಒದಗಿಸುವ ಈ ಹಣ್ಣಿನಲ್ಲಿ ಕ್ಯಾಲರಿ ಕಡಿಮೆ, ಕೊಬ್ಬು ಬಹುತೇಕ ಇಲ್ಲವೇ ಇಲ್ಲ. ಇದರಲ್ಲಿ ಅಗತ್ಯ ಪ್ರಮಾಣದ ನಾರು ಇರುವುದರಿಂದ ಹೊಟ್ಟೆ ತುಂಬಿದ ಅನುಭವ ನೀಡಿ, ಕಳ್ಳ ಹಸಿವೆಯನ್ನು ನೀಗಿಸುತ್ತದೆ. ಹೆಚ್ಚು ಕಾಲದವರೆಗೆ ಹಸಿವಾಗದಂತೆ ತಡೆಯುತ್ತದೆ. ಬಾಯಾಡುವುದಕ್ಕೆ ಇನ್ನೇನಿದೆ ಎಂದು ತಡಕುವುದನ್ನು ತಡೆಯುತ್ತದೆ. ಜೊತೆಗೆ, ದೇಹಕ್ಕೆ ಅಗತ್ಯವಾದ ಖನಿಜಗಳು, ವಿಟಮಿನ್‌ ಸಿ ಮತ್ತಿತರ ಉತ್ಕರ್ಷಣ ನಿರೋಧಕಗಳನ್ನು ಒದಗಿಸುತ್ತದೆ. ಹಾಗಾಗಿ ತೂಕ ಇಳಿಸುವ ಯೋಜನೆಯಿದ್ದರೆ ಪೇರಲೆ ಹಣ್ಣನ್ನು ಸಂತೋಷದಿಂದ ನಿಮ್ಮ ಆಹಾರಯೋಜನೆಯಲ್ಲಿ ಸೇರಿಸಿಕೊಳ್ಳಿ. ಆದರೆ ಇದನ್ನು ಆಹಾರದ ಭಾಗವಾಗಿ ಬಳಸಿಕೊಳ್ಳುವುದು ಹೇಗೆ? ಪೇರಲೆಯನ್ನು ಕಚ್ಚಿ ತಿನ್ನುವುದು ಮಾತ್ರವೇ ಎಲ್ಲರಿಗೂ ಪರಿಚಿತವಾದದ್ದು. ಹೀಗೆ ಎಷ್ಟು ತಿನ್ನಲು ಸಾಧ್ಯ? ದಿನವೂ ಅದನ್ನೇ ಮಾಡಿದರೆ ಬೋರಾಗುವುದಿಲ್ಲವೇ? ಇಲ್ಲಿದೆ ಪರಿಹಾರ.


ಸೀಬೆ ಸ್ಮೂದಿ

ತೂಕ ಇಳಿಸುವವರಿಗೆ ಸ್ಮೂದಿ ಉತ್ತಮ ಆಹಾರ. ಯಾವುದೇ ಹಣ್ಣುಗಳನ್ನು ಇಡಿಯಾಗಿ ಅಥವಾ ಉಳಿದೆಲ್ಲ ಹಣ್ಣುಗಳ ಜೊತೆಯಾಗಿ ಹಾಕಿ ಸ್ಮೂದಿ ಮಾಡಿಕೊಳ್ಳಬಹುದು. ಇದಕ್ಕೆ ಪೇರಲೆಯನ್ನೂ ಸೇರಿಸಿದರೆ ಉತ್ತಮ. ಇದು ಸ್ಮೂದಿಯ ರುಚಿ ಮತ್ತು ಘಮವನ್ನು ಇಮ್ಮಡಿಗೊಳಿಸುತ್ತದೆ. ಮಾತ್ರವಲ್ಲ, ಪೌಷ್ಟಿಕಾಂಶವನ್ನೂ ಹೆಚ್ಚಿಸುತ್ತದೆ. ಬಾಳೆಹಣ್ಣು, ಬೆರ್ರಿಗಳು ಮುಂತಾದ ನಿಮ್ಮ ಆಯ್ಕೆಯ ಹಣ್ಣುಗಳ ಜೊತೆಗೆ ಸೀಬೆಯನ್ನೂ ಸೇರಿಸಿ. ಜೊತೆಗೆ ಹಾಲು ಅಥವಾ ಮೊಸರು- ಯಾವುದು ಸರಿ ಹೊಂದುತ್ತದೆ ಎಂಬುದೂ ನಿಮ್ಮದೇ ಆಯ್ಕೆ. ಇದರ ಮೇಲೆ ಚಿಯಾ, ಅಗಸೆ ಮುಂತಾದ ಬೀಜಗಳನ್ನು ಉದುರಿಸಿದರೆ ಸತ್ವಯುತ ಸ್ಮೂದಿ ಸಿದ್ಧ.

ಸಂಪೂರ್ಣ ಸುದ್ದಿಗಾಗಿ/ಮಾಹಿತಿಗಾಗಿ, ಈ ಲಿಂಕ್ ಅನ್ನು ಕ್ಲಿಕ್ ಮಾಡಿ 👉 Kannada Health Tips

ಇಂತಹ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 👉 ಆರೋಗ್ಯ



ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Healthy Food: ಈ ಎಲ್ಲ ರಾಸಾಯನಿಕಗಳು ನೀವು ತಿನ್ನುವ ಆಹಾರದಲ್ಲಿದೆಯೇ? ಹಾಗಾದರೆ ಎಚ್ಚರ!

Eating Food Packed In Newspaper: ನಿತ್ಯವೂ ದಿನಪತ್ರಿಕೆಯಲ್ಲಿ ಬಜ್ಜಿ ಬೋಂಡಾ ತಿನ್ನುತ್ತೀರಾ?; ಹಾಗಾದರೆ ಎಚ್ಚರ!

Benefits Of Tamarind: ಬಾಯಲ್ಲಿ ನೀರೂರಿಸುವ ಹುಣಸೆ ಹಣ್ಣಿನ ಲಾಭಗಳು ಗೊತ್ತೇ?