Hair Care Tips: ಕೂದಲು ಉದುರೋದಕ್ಕೆ ಕಾರಣ ಏನು ಅನ್ನೋದನ್ನ ಮೊದಲು ತಿಳಿದುಕೊಳ್ಳಿ!
ವಯಸ್ಸಾದಂತೆ ಹಣೆ ಅಗಲವಾಗುತ್ತಾ ಹೋಗುವುದು ಸಾಮಾನ್ಯ ಸಂಗತಿ. ಇದು ವಂಶವಾಹಿಗಳಿಂದಲೂ ಬರುವುದಕ್ಕೆ ಸಾಧ್ಯ. ಮಹಿಳೆಯರಿಗಿಂತ ಪುರುಷರಲ್ಲಿ ಹೆಚ್ಚಾಗಿ ಬೊಕ್ಕತಲೆಯ ಸಮಸ್ಯೆ ಕಾಣುತ್ತದೆ. ಆದರೆ ಕಿರಿಯ ವಯಸ್ಸಿನಲ್ಲೇ ಹಣೆ ಅಗಲವಾಗಿ, ಕೂದಲ ಗಾತ್ರ ಕಿರಿದಾಗುವುದು (Hair Care Tips) ಇತ್ತೀಚಿನ ವರ್ಷಗಳಲ್ಲಿ ಹೆಚ್ಚುತ್ತಿದೆ.
ಕೂದಲು ಉದುರುವುದು ಈಗ ಸಮಸ್ಯೆಯ ಬದಲಿಗೆ ಎಲ್ಲರ ಪಾಲಿನ ನಿತ್ಯಸತ್ಯವಾಗಿ ಪರಿಣಮಿಸಿದೆ. ಆದರೆ ಯಾವಾಗ ಹಣೆ ದೊಡ್ಡದಾಗುತ್ತಾ ಕೂದಲಿನ ಹಣೆಬರಹ ಸಣ್ಣದಾಗಲು ಪ್ರಾರಂಭಿಸುತ್ತದೊ ಆಗ ಆತಂಕವೂ ಶುರುವಾಗುತ್ತದೆ. ʻಛೇ! ಕೂದಲು ಉದುರುತ್ತಿದೆʼ ಎಂದು ಎದುರಿಗೆ ದೇಶಾವರಿ ಸಂತಾಪ ಸೂಚಿಸುವ ಜನ, ಬೆನ್ನ ಹಿಂದೆ ಬೊಕ್ಕ ತಲೆಯವರಿಗೆ ನಾನಾ ಹೆಸರಿಡುತ್ತಾರೆ ಎಂಬುದು ರಹಸ್ಯವೇನಲ್ಲ. ಹೇಳುವವರು ಏನೇ ಹೇಳಲಿ, ಆದರೆ ಕೂದಲು ಉದುರಿ ತಲೆ ಬೋಳಾಗುವುದು (Hair Care Tips ) ಸಂತೋಷದ ವಿಷಯವಂತೂ ಖಂಡಿತಾ ಅಲ್ಲ.
ವಯಸ್ಸಾದಂತೆ ಹಣೆ ಅಗಲವಾಗುತ್ತಾ ಹೋಗುವುದು ಸಾಮಾನ್ಯ ಸಂಗತಿ. ಇದು ವಂಶವಾಹಿಗಳಿಂದಲೂ ಬರುವುದಕ್ಕೆ ಸಾಧ್ಯ. ಮಹಿಳೆಯರಿಗಿಂತ ಪುರುಷರಲ್ಲಿ ಹೆಚ್ಚಾಗಿ ಬೊಕ್ಕತಲೆಯ ಸಮಸ್ಯೆ ಕಾಣುತ್ತದೆ. ಆದರೆ ಕಿರಿಯ ವಯಸ್ಸಿನಲ್ಲೇ ಹಣೆ ಅಗಲವಾಗಿ, ಕೂದಲ ಗಾತ್ರ ಕಿರಿದಾಗುವುದು ಇತ್ತೀಚಿನ ವರ್ಷಗಳಲ್ಲಿ ಹೆಚ್ಚುತ್ತಿದೆ. ಒಮ್ಮೆ ಕೂದಲ ಅಂಚುಗಳು ಹಿಂದೆ ಸರಿದು, ಹಣೆ ಅಗಲವಾಗುತ್ತಾ ಹೋದರೆ ಅದನ್ನು ನಿಲ್ಲಿಸುವುದು ಕಷ್ಟ. ಹೆಚ್ಚಿನ ಸಾರಿ ಇದಕ್ಕೆ ಪರಿಹಾರ ಹುಡುಕುವ ಭರದಲ್ಲಿ (haircare tips) ಇನ್ನಷ್ಟು ಹಾನಿಯನ್ನೇ ಮಾಡಿಕೊಳ್ಳುವ ಸಂದರ್ಭಗಳು ಹೆಚ್ಚು. ಆದರೆ ಹೀಗೇಕಾಗುತ್ತಿದೆ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳುವುದಿಲ್ಲ
ಹಾನಿ ಹೆಚ್ಚುವುದು ಹೀಗೆ!
ಕೂದಲು ಉದುರುತ್ತಿರುವ ಕಾರಣವನ್ನು ಅರ್ಥ ಮಾಡಿಕೊಳ್ಳದೇ ನಮ್ಮಿಷ್ಟದಂತೆ ಮನೆಮದ್ದು ಮಾಡಿಕೊಳ್ಳುವುದರಿಂದ ಸಮಸ್ಯೆ ಬಿಗಡಾಯಿಸಬಹುದು. ಕೂದಲು ಉದುರುವುದಕ್ಕೆ ಕಾರಣಗಳು ನಾನಾ ರೀತಿಯಲ್ಲಿ ಇರುತ್ತವೆ. ಅತಿಯಾದ ಒತ್ತಡ, ನಿದ್ದೆಗೆಡುವುದು ಕಾರಣವಾಗಿದ್ದರೆ ಅದಕ್ಕೆ ಪರಿಹಾರ ಕಂಡುಕೊಳ್ಳಿ. ಸಮತೋಲನವಿಲ್ಲದ ಆಹಾರ ಪದ್ಧತಿ ನಿಮ್ಮದಾಗಿದ್ದರೆ, ಪೌಷ್ಟಿಕಾಂಶ ಕೂದಲಿಗೆ ಮಾತ್ರವಲ್ಲ, ಇಡೀ ದೇಹಕ್ಕೇ ಬೇಕಾಗುತ್ತದೆ. ಹಾರ್ಮೋನುಗಳ ತೊಂದರೆಯಿಂದಲೂ ಈ ಸಮಸ್ಯೆ ಕಾಣಬಹುದು. ಸೂಕ್ಷ್ಮ ಪೋಷಕಾಂಶಗಳ ಕೊರತೆ ಇದ್ದರೆ ಅದರ ಅಡ್ಡ ಪರಿಣಾಮ ಕೂದಲಿನ ಮೇಲಾಗುವ ಸಾಧ್ಯತೆಯಿದೆ. ಇಂಥ ಸಮಸ್ಯೆಗಳ ಪರಿಹಾರಕ್ಕೆ ವೈದ್ಯರನ್ನೇ ಸಂಪರ್ಕಿಸಬೇಕಾಗುತ್ತದೆ. ಇನ್ನು ವಂಶವಾಹಿಗಳು ಕಾರಣವಾಗಿದ್ದಲ್ಲಿ ಏನು ಮಾಡಿದರೂ ಪರಿಣಾಮ ಕಾಣುವುದು ಅನುಮಾನ.
ಸಂಪೂರ್ಣ ಸುದ್ದಿಗಾಗಿ/ಮಾಹಿತಿಗಾಗಿ, ಈ ಲಿಂಕ್ ಅನ್ನು ಕ್ಲಿಕ್ ಮಾಡಿ 👉 ಆರೋಗ್ಯ
ಇಂತಹ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 👉 Kannada Health Tips
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ