Hot or cold: ಬಿಸಿನೀರೋ.. ತಣ್ಣೀರೋ.. ಕುಡಿಯಲು ಯಾವುದು ಉತ್ತಮ?

 ತಣ್ಣೀರು ಫಟಾಫಟ್‌ ನಮ್ಮನ್ನು ರಿಫ್ರೆಶ್‌ ಮಾಡಿಸುವ ಗುಣವನ್ನು ಹೊಂದಿದೆ. ಆದರೆ ಬೆಚ್ಚಗಿನ ನೀರು ಕುಡಿಯುವುದರಿಂದ ನಮ್ಮ ಜೀರ್ಣಕ್ರಿಯೆ ವೃದ್ಧಿಯಾಗುತ್ತದೆ. ಯಾವುದು, ಯಾವಾಗ ಒಳ್ಳೆಯದು?

ಪ್ರತಿನಿತ್ಯ ಅಗತ್ಯ ಪ್ರಮಾಣದ ನೀರು ಕುಡಿಯುವುದು ದೇಹಕ್ಕೆ ಎಷ್ಟು ಅವಶ್ಯಕ ಎಂಬುದು ಎಲ್ಲರಿಗೂ ತಿಳಿದಿರುವ ಸಾಮಾನ್ಯಜ್ಞಾನ. ಸರಿಯಾದ ಪ್ರಮಾಣದಲ್ಲಿ ನಮ್ಮ ದೇಹಕ್ಕೆ ಬೇಕಾಗುವ ನೀರು ಪೂರೈಕೆ ಮಾಡುತ್ತಿರುವುದರಿಂದಲೇ ಬಹಳಷ್ಟು ನಮ್ಮ ಆರೋಗ್ಯದ ಸಮಸ್ಯೆಗಳು ಸುಧಾರಿಸುತ್ತವೆ. ಆದರೂ ಬಹಳಷ್ಟು ಸಾರಿ ನಮಗೆ ಇಂತಹ ತೀರಾ ಸಾಮಾನ್ಯ ವಿಷಯಗಳ ಬಗೆಗೆ ಇರುವ ಅಲ್ಪಜ್ಞಾನದಿಂದಲೇ ತೊಂದರೆಗಳನ್ನು ಎಳೆದುಕೊಳ್ಳುತ್ತೇವೆ. ಹಾಗಾಗಿ ದಿನನಿತ್ಯ ಕುಡಿಯುವ ನೀರಿನ ಬಗ್ಗೆಗೆ ಕೆಲವು ಗೊಂದಲಗಳ ಪರಿಹಾರವನ್ನು ಇಲ್ಲಿ ಮಾಡುವ ಪ್ರಯತ್ನ ಮಾಡಲಾಗಿದೆ.

ಕೆಲವರು ತಣ್ಣೀರು (ಕೋಲ್ಡ್) ಕುಡಿಯುವುದು ದೇಹಕ್ಕೆ ಒಳ್ಳೆಯದಲ್ಲ ಎಂದು ಬಲವಾಗಿ ನಂಬಿರುತ್ತಾರೆ. ಇದು ಆರೋಗ್ಯದ ಮೇಲೆ ಸಾಕಷ್ಟು ಕೆಟ್ಟ ಪರಿಣಾಮ ಬೀರುತ್ತದೆ ಎಂಬುದು ಅವರ ಅಂಬೋಣ. ತಣ್ಣಗಿನ ನೀರು ಜಠರವನ್ನು ಇದು ಕುಗ್ಗಿಸುತ್ತದೆ ಎಂಬ ಆಲೋಚನೆಯ ತಳಹದಿಯ ಲೆಕ್ಕಾಚಾರವಿದು. ಇನ್ನೂ ಕೆಲವರು ದೇಹದ ಉಷ್ಣತೆಗಿಂತ ಕಡಿಮೆ ಉಷ್ಣತೆಯ ನೀರು ಕುಡಿದರೆ, ದೇಹ ಸಾಮಾನ್ಯ ಉಷ್ಣತೆಯನ್ನು ಸಮದೂಗಿಸಲು ಸಾಕಷ್ಟು ಕಷ್ಟ ಪಡಬೇಕಾಗುತ್ತದೆ ಎಂದು ನಂಬುತ್ತಾರೆ. ಚೀನಾದಲ್ಲಿ, ಅತೀ ತಣ್ಣಗಿನ ನೀರು ಹಾಗೂ ಬಿಸಿ ನೀರು ಎರಡೂ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬ ನಂಬಿಕೆಯಿದೆ. ಕುಡಿಯುವ ನೀರಿನ ಕುರಿತು ಎಲ್ಲ ಮನೆಗಳಲ್ಲೂ ಒಂದಲ್ಲ ಒಂದು ನಂಬಿಕೆಗಳು ಇರುವುದರಿಂದಲೇ, ಈ ಸಂಶಯಗಳನ್ನು ಪರಿಹರಿಸುವ ಪ್ರಯತ್ನವಿದು.

ಸಂಶೋಧನೆಗಳ ಪ್ರಕಾರ, ಬೆಚ್ಚಗಿನ ನೀರು ಕುಡಿಯುವುದರಿಂದ ನಮ್ಮ ಜೀರ್ಣಕ್ರಿಯೆ ವೃದ್ಧಿಯಾಗುತ್ತದೆ. ಹಾಗೆಂದು ಗಂಟಲು ಸುಟ್ಟುಹೋಗುವ ಬಿಸಿನೀರು ಕುಡಿಯಬಾರದು. ಶೀತ, ನೆಗಡಿ ಕೆಮ್ಮಿನಂತಹ ತೊಂದರೆಗಳಿದ್ದರೂ, ಆಗಾಗ ಕಫ ಆಗುತಿದ್ದರೂ, ಕಫದ ದೇಹಪ್ರಕೃತಿ ಹೊಂದಿದವರೂ ಬಿಸಿನೀರನ್ನು ಕುಡಿಯುವುದು ಉತ್ತಮ. ಬಿಸಿನೀರು ನಮ್ಮನ್ನು ರಿಲ್ಯಾಕ್ಸ್‌ ಮಾಡಿಸುತ್ತದೆ. ದೇಹದಿಂದ ಕಲ್ಮಶಗಳನ್ನು ಹೊರಕ್ಕೆ ತಳ್ಳುತ್ತದೆ. ಚಳಿಗಾಲದಲ್ಲಿ ನಡುಕವನ್ನೂ ಬಿಸಿನೀರು ಕಡಿಮೆಗೊಳಿಸುತ್ತದೆ. ರಕ್ತಪರಿಚಲನೆಯನ್ನು ಚುರುಕುಗೊಳಿಸುತ್ತದೆ.

ಹಾಗಾದರೆ ತಣ್ಣೀರು ಕೆಟ್ಟದ್ದೇ? ಎಂಬ ಪ್ರಶ್ನೆ ಒಡನೆಯೇ ಬಂದೇ ಬರುತ್ತದೆ. ತಣ್ಣೀರು ಫಟಾಫಟ್‌ ನಮ್ಮನ್ನು ರಿಫ್ರೆಶ್‌ ಮಾಡಿಸುವ ಗುಣವನ್ನು ಹೊಂದಿದೆ. ಕಠಿಣ ವ್ಯಾಯಾಮಗಳನ್ನು ಮಾಡಿದ ಮೇಲೆ ದೇಹದಲ್ಲಿರುವ ನೀರಿನ ಪ್ರಮಾಣವನ್ನು ಒಡನೆಯೇ ಸರಿದೂಗಿಸುವಲ್ಲಿ ತಣ್ಣೀರು ಮುಖ್ಯಪಾತ್ರ ವಹಿಸುತ್ತದೆ. ದೇಹದ ಉಷ್ಣತೆಯನ್ನೂ ಕಡಿಮೆ ಮಾಡುತ್ತದೆ. ಬೇಸಿಗೆ ಕಾಲದಲ್ಲಿ ಬಿಸಿಲಿನ ಝಳದಿಂದ ಎದುರಾಗುವ ತೊಂದರೆಗಳಿಂದ ಪಾರಾಗಲು ತಣ್ಣೀರು ಸಹಾಯ ಮಾಡುತ್ತದೆ.

ಆದರೆ, ಕೆಲವು ವಿಷಯಗಳನ್ನು ಸದಾ ನೆನಪಿನಲ್ಲಿಡಬೇಕು…..

ಸಂಪೂರ್ಣ ಸುದ್ದಿಗಾಗಿ/ಮಾಹಿತಿಗಾಗಿ, ಈ ಲಿಂಕ್ ಅನ್ನು ಕ್ಲಿಕ್ ಮಾಡಿ 👉 ಆರೋಗ್ಯ

ಇಂತಹ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 👉 Kannada News

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Healthy Food: ಈ ಎಲ್ಲ ರಾಸಾಯನಿಕಗಳು ನೀವು ತಿನ್ನುವ ಆಹಾರದಲ್ಲಿದೆಯೇ? ಹಾಗಾದರೆ ಎಚ್ಚರ!

Eating Food Packed In Newspaper: ನಿತ್ಯವೂ ದಿನಪತ್ರಿಕೆಯಲ್ಲಿ ಬಜ್ಜಿ ಬೋಂಡಾ ತಿನ್ನುತ್ತೀರಾ?; ಹಾಗಾದರೆ ಎಚ್ಚರ!

Benefits Of Tamarind: ಬಾಯಲ್ಲಿ ನೀರೂರಿಸುವ ಹುಣಸೆ ಹಣ್ಣಿನ ಲಾಭಗಳು ಗೊತ್ತೇ?