Weight Loss Tips: ಹೊಟ್ಟೆಯ ಹಠಮಾರಿ ಬೊಜ್ಜು ಕರಗಿಸಬೇಕೇ? ಹಸಿ ಬೆಳ್ಳುಳ್ಳಿಯಲ್ಲಿದೆ ಇದಕ್ಕೆ ಪರಿಹಾರ!

 ನೈಸರ್ಗಿಕವಾಗಿ ಹೊಟ್ಟೆ ಕರಗಿಸುವ ತಂತ್ರಗಳಲ್ಲಿ (weight loss tips) ಪ್ರಮುಖವಾದುದು ಎಂದು ಬೆಳ್ಳುಳ್ಳಿಯ ಬಳಕೆ (garlic uses). ಅದು ಹೇಗೆ? ಬನ್ನಿ ನೋಡೋಣ.


ಏನೇ ಮಾಡಿದರೂ ಹೊಟ್ಟೆ ಮಾತ್ರ ಕರಗುತ್ತಿಲ್ಲ ಎಂಬುದು ಕೆಲವರ ಅಳಲು. ದಿನವೂ ನಿಂಬೆರಸ ಜೇನುತುಪ್ಪ ಹಾಕಿದ ಬಿಸಿನೀರು ಬೆಳಗ್ಗೆದ್ದ ಕೂಡಲೇ ಹೀರಿದ್ದಾಯಿತು. ಇನ್ನೇನೋ ಜ್ಯೂಸುಗಳನ್ನು ಮಾಡಿ ಕುಡಿದಿದ್ದಾಯಿತು. ವ್ಯಾಯಾಮ, ನಡಿಗೆ ಎಲ್ಲವೂ ಮಾಡಲಾಗುತ್ತಿದೆ. ಆದರೂ ಹೊಟ್ಟೆ ಮಾತ್ರ ಹಾಗೆಯೇ ಇದೆ. ಒಂದಿಂಚೂ ಅಲುಗಾಡಿಲ್ಲ (weight loss guide) ಎಂಬುದು ಬಹುತೇಕರ ಗೋಳು. ನೈಸರ್ಗಿಕವಾಗಿರಬೇಕು, ಸುಲಭವೂ ಆಗಿರಬೇಕು (weight loss tips), ಆದರೆ, ಹೊಟ್ಟೆ ಮಾತ್ರ ಕರಗಿಸಬೇಕು ಎಂದುಕೊಳ್ಳುವ ಮಂದಿಗೆ ಇಲ್ಲೊಂದು ಮನೆಮದ್ದಿದೆ. ಅದು ಬೆಳ್ಳುಳ್ಳಿ! ಬೆಳ್ಳುಳ್ಳಿಯ ವಾಸನೆ ಎಂದು ಮಾರು ದೂರ ಓಡುವ ಮಂದಿಗೆ ಇದು ಕಷ್ಟಸಾಧ್ಯವಾದರೂ, ನಾವು ಮನಸ್ಸು ಮಾಡಿದರೆ ಬೆಳ್ಳುಳ್ಳಿಯ ಏಕೈಕ ಪರಿಶ್ರಮದಿಂದ (garlic benefits, garlic uses) ಇದು ಸಾಧ್ಯವಾಗುತ್ತದೆ. ಆದರೆ, ಹಸಿ ಬೆಳ್ಳುಳ್ಳಿ ತಿನ್ನುವ ಪರಿಶ್ರಮ ಮಾತ್ರ ನಾವು ತೆಗೆದುಕೊಳ್ಳಬೇಕು ಅಷ್ಟೇ.

ಸಂಶೋಧನೆಗಳ ಪ್ರಕಾರ, ಬೆಳ್ಳುಳ್ಳಿಯಲ್ಲಿ ಸಲ್ಫರ್‌ ಅಂಶವು ಹೇರಳವಾಗಿದ್ದು ಇದು ದೇಹದಲ್ಲಿರುವ ವಿಷಕಾರಕಗಳನ್ನು ಹೊರಹಾಕಿ ಜೀರ್ಣಕ್ರಿಯೆಯನ್ನು ಸರಾಗಗೊಳಿಸುತ್ತದೆ. ಇದರಲ್ಲಿ ಕೊಬ್ಬು ಕರಗಿಸುವ ಗುಣವೂ (garlic for weight loss) ಇರುವುದರಿಂದ ಬಹಳ ಸುಲಭವಾಗಿ ಹಾಗೂ ಬೇಗನೆ ಕೊಬ್ಬನ್ನು ಕರಗಿಸಿ ದೇಹವನ್ನು ಚುರುಕಾಗಿಡುತ್ತದೆ. ಹಾಗಾದರೆ ಹಸಿ ಬೆಳ್ಳುಳ್ಳಿಯನ್ನು ತಿನ್ನುವುದು ಹೇಗೆ ಎಂಬ ಪ್ರಶ್ನೆಯೇ. ನಿಮ್ಮ ಪ್ರಶ್ನೆಗೆ ಉತ್ತರ ಇಲ್ಲಿದೆ. ಈ ಎಲ್ಲ ವಿಧಾನಗಳ ಮೂಲಕ ಹಸಿ ಬೆಳ್ಳುಳ್ಳಿಯನ್ನು ನಿಮ್ಮ ಹೊಟ್ಟೆ ಸೇರುವಂತೆ ಮಾಡಬಹುದು.

1. ಬಿಸಿನೀರು ಹಾಗೂ ಬೆಳ್ಳುಳ್ಳಿ: ದಿನದ ಆರಂಭವನ್ನು ಬೆಳ್ಳುಳ್ಳಿಯ ಜೊತೆಗೆ ಆರಂಬಿಸಲು ಇದು ಒಳ್ಳೆಯದು. ಬೆಳಗ್ಗೆ ಎದ್ದ ಮೇಲೆ ಒಂದೆರಡು ಎಸಳು ಬೆಳ್ಳುಳ್ಳಿಯನ್ನು ಜಜ್ಜಿ ಬಿಸಿ ನೀರಿನಲ್ಲಿ ಹಾಕಿಡಿ. ಅದರ ರಸ ನೀರಿನ ಜೊತೆ ಹೊಂದಿಕೊಳ್ಳಲು ೧೦ -೧೫ ನಿಮಿಷಗಳು ಬಿಡಿ. ನಂತರ ಆ ನೀರನ್ನು ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ. ಈ ಬೆಳ್ಳುಳ್ಳಿ ನೀರು ಮ್ಯಾಜಿಕ್‌ನಂತೆ ಕಾರ್ಯ ನಿರ್ವಹಿಸುವುದಲ್ಲದೆ, ಹೊಟ್ಟೆಯ ಕೊಬ್ಬನ್ನು ಕರಗುವಂತೆ ಮಾಡಿ, ಜೀರ್ಣಕ್ರಿಯೆಯನ್ನು ಚುರುಕುಗೊಳಿಸುತ್ತದೆ.

2 ನಿಂಬೆರಸ ಮತ್ತು ಬೆಳ್ಳುಳ್ಳಿ: ಕೆಲವರಿಗೆ ಬೆಳ್ಳುಳ್ಳಿಯ ವಾಸನೆ ಹೊಂದಿಕೆಯಾಗದು. ಬಹುತೇಕರಿಗೆ ಹಸಿ ಬೆಳ್ಳುಳ್ಳಿ ತಿನ್ನಲು ಸಾಧ್ಯವೇ ಆಗದು. ಆದರೂ ಪ್ರಯತ್ನ ಪಡಲು ಮನಸ್ಸಿರುವ ಮಂದಿ ನಿಂಬೆಹಣ್ಣಿನ ರಸದ ಜೊತೆಗೆ ಪ್ರಯತ್ನಿಸಬಹುದು. ಬೆಳ್ಳುಳ್ಳಿಯನ್ನು ಜಜ್ಜಿ ಬಿಸಿನೀರಿನ ಜೊತೆ ಸೇರಿಸಿ, ಕೆಲ ನಿಮಿಷಗಳ ಕಾಲ ಸೆಟ್‌ ಆಗಲು ಬಿಟ್ಟು, ಈ ನೀರಿಗೆ ಅರ್ಧ ನಿಂಬೆಹಣ್ಣನ್ನು ಹಿಂಡಿ, ಕುಡಿಯಿರಿ. ಇದರಲ್ಲಿ ಹೊಟ್ಟೆ ಕರಗಿಸುವ ಡಬಲ್‌ ಪವರ್‌ ಇದ್ದು, ನಿಂಬೆಹಣ್ಣಿನ ವಿಟಮಿನ್‌ ಸಿ ಒಳ್ಳೆಯದನ್ನೇ ಮಾಡುತ್ತದೆ.


3. ಬೆಳ್ಳುಳ್ಳಿ ಹಾಗೂ ಜೇನುತುಪ್ಪ: ಹಸಿಬೆಳ್ಳುಳ್ಳಿಯ ವಾಸಗೆ ಹಾಗೂ ರುಚಿ ಎರಡೂ ಆಗದ ಮಂದಿ ಬೆಳ್ಳುಳ್ಳಿ ಜಜ್ಜಿ ರಸ ತೆಗೆದು ಅದಕ್ಕೆ ಒಂದು ಚಮಚ ಜೇನುತುಪ್ಪ ಸೇರಿಸಿ ಬಿಸಿನೀರಿನಲ್ಲಿ ಹಾಕಿ ಕುಡಿಯಬಹುದು. ಬೆಳ್ಳುಳ್ಳಿಯ ವಾಸನೆ ಹಾಗೂ ರುಚಿ, ಜೇನುತುಪ್ಪ ಸೇರಿಸಿರುವುದರಿಂದ ಅರಿವಿಗೆ ಬಾರದು. ಜೊತೆಗೆ ಇದರ ಅತ್ಯುತ್ತಮ ಆರೋಗ್ಯ ಲಾಭಗಳನ್ನೂ ಪಡೆಯಬಹುದು.


ಸಂಪೂರ್ಣ ಸುದ್ದಿಗಾಗಿ/ಮಾಹಿತಿಗಾಗಿ, ಈ ಲಿಂಕ್ ಅನ್ನು ಕ್ಲಿಕ್ ಮಾಡಿ 👉 ಬೆಳ್ಳುಳ್ಳಿ ಉಪಯೋಗಗಳು

ಇಂತಹ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 👉 ಕನ್ನಡದಲ್ಲಿ ಆರೋಗ್ಯ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Healthy Food: ಈ ಎಲ್ಲ ರಾಸಾಯನಿಕಗಳು ನೀವು ತಿನ್ನುವ ಆಹಾರದಲ್ಲಿದೆಯೇ? ಹಾಗಾದರೆ ಎಚ್ಚರ!

Eating Food Packed In Newspaper: ನಿತ್ಯವೂ ದಿನಪತ್ರಿಕೆಯಲ್ಲಿ ಬಜ್ಜಿ ಬೋಂಡಾ ತಿನ್ನುತ್ತೀರಾ?; ಹಾಗಾದರೆ ಎಚ್ಚರ!

Benefits Of Tamarind: ಬಾಯಲ್ಲಿ ನೀರೂರಿಸುವ ಹುಣಸೆ ಹಣ್ಣಿನ ಲಾಭಗಳು ಗೊತ್ತೇ?