Infosys Narayanamurty : ಮಗಳು ಅಕ್ಷತಾ ಜತೆ ಶಾಪ್‌ಗೆ ಬಂದು ಐಸ್‌ ಕ್ರೀಂ ಸವಿದ ಇನ್ಫಿ ನಾರಾಯಣ ಮೂರ್ತಿ

 Infosys Narayanamurty : ಜಯನಗರದ ಐಸ್‌ ಕ್ರೀಂ ಜಾಯಿಂಟ್‌ಗೆ ಬಂದು ಕುಳಿತಿದ್ದ ಆ ಅಪ್ಪ-ಮಗಳ ಜೋಡಿ ಎಲ್ಲರ ಗಮನ ಸೆಳೆದಿತ್ತು. ಸದಾ ಸರಳತೆಯನ್ನೇ ಪ್ರದರ್ಶಿಸುವ ಅವರ ಸೌಜನ್ಯಕ್ಕೆ ಈಗ ಎಲ್ಲ ಕಡೆ ಪ್ರಶಂಸೆಯ ಮಾತುಗಳು ಕೇಳಿಬರುತ್ತಿವೆ.


ಬೆಂಗಳೂರು: ಎರಡು ದಿನದ ಹಿಂದೆ ಜಯನಗರದ ಜನಪ್ರಿಯ ಐಸ್‌ ಕ್ರೀಂ ಶಾಪ್‌ ಐಕಾನಿಕ್‌ ಕಾರ್ನರ್‌ (Ice Cream Corner Jayanagara) ಹೌಸ್‌ಗೆ ಇಬ್ಬರು ಅಪರೂಪದ ಅತಿಥಿಗಳು ಬಂದಿದ್ದರು. ಸೀದಾ ಸಾದಾ ದಿರಸಿನಲ್ಲಿದ್ದ ಅಪ್ಪ ಮತ್ತು ಮಗಳು ಆರಾಮವಾಗಿ ಕುಳಿತು ಐಸ್‌ ಕ್ರೀಂ ಸವಿದರು (Ice cream). ಆಗ ಕೆಲವರು ಯಾರಪ್ಪಾ ಇವರು ಅಂತ ಕುತೂಹಲದಿಂದ ನೋಡಿದರು. ಕೆಲವರು ಯಾರೋ ಅಪ್ಪ-ಮಗಳು ಬಂದಿದ್ದಾರೆ ಅಂದುಕೊಂಡು ಸುಮ್ಮನಾದರು. ಅಂದ ಹಾಗೆ ಆವತ್ತು ಅಲ್ಲಿಗೆ ಬಂದಿದ್ದರು ಸಾಮಾನ್ಯದವರಂತೂ ಅಲ್ಲ. ಒಬ್ಬರು ಜಗತ್ತಿನ ಅತಿ ದೊಡ್ಡ ಐಟಿ ಕಂಪನಿಗಳಲ್ಲಿ ಒಂದರ ಸ್ಥಾಪಕರು. ಇನ್ನೊಬ್ಬರು ಬ್ರಿಟನ್‌ ಪ್ರಧಾನಿಯ ಪತ್ನಿ. ಹೌದು, ಅವರೇ ಇನ್ಫೋಸಿಸ್‌ನ ಎನ್‌.ಆರ್‌. ನಾರಾಯಣಮೂರ್ತಿ (Infosys Narayanamurty) ಮತ್ತು ಅವರ ಮಗಳು ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌ ಅವರ ಪತ್ನಿ ಅಕ್ಷತಾ ಮೂರ್ತಿ (Akshatha Murthy)

ನಾರಾಯಣಮೂರ್ತಿ ಮತ್ತು ಸುಧಾ ಮೂರ್ತಿ ದಂಪತಿ ಈಗ ಪರಮ ಶ್ರೀಮಂತರೇ ಆಗಿದ್ದರೂ ತಾವು ಬೆಳೆದು ಬಂದ ದಾರಿಯನ್ನು ಎಂದೂ ಮರೆತಿಲ್ಲ. ಹೀಗಾಗಿ ಸದಾ ಸರಳ ಜೀವನವನ್ನೇ ನಡೆಸುತ್ತಿದ್ದಾರೆ. ಇದೇ ಹವ್ಯಾಸವನ್ನು ಮಗಳಿಗೂ ಬೆಳೆಸಿದ್ದಾರೆ. ಹೀಗಾಗಿ ಅಪ್ಪ ಮತ್ತು ಮಗಳು ಅನಾಮಿಕರಂತೆ ಬಂದು ಐಸ್‌ ಕ್ರೀಂ ತಿಂದಿದ್ದರು.

ಅವರಿಬ್ಬರು ಐಸ್‌ ಕ್ರೀಂ ತಿನ್ನುತ್ತಿದ್ದುದನ್ನು ನೋಡಿದ ಆದರ್ಶ್‌ ಹೆಗ್ಡೆ ಎಂಬವರು ಫೋಟೊ ತೆಗೆದು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಕ್ಯಾಶುವಲ್‌ ಉಡುಪಿನಲ್ಲಿರುವ ಅಪ್ಪ-ಮಗಳ ಈ ಚೈತನ್ಯದ ಚಿಲುಮೆಯಂಥ ಚಿತ್ರ ಈಗ ಇಂಟರ್ನೆಟ್‌ನಲ್ಲಿ ಸೆನ್ಸೇಷನ್‌ ಆಗಿದೆ. ಹಲವಾರು ಮಂದಿ ತಂದೆ-ಮಗಳು ಐಸ್‌ಕ್ರೀಂ ಸವಿಯುವ ಫೋಟೋಗೆ ಕಮೆಂಟ್‌ ಮಾಡಿದ್ದಾರೆ, ತಾವೂ ಶೇರ್‌ ಮಾಡಿಕೊಂಡಿದ್ದಾರೆ.

First Published on Vistara News.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Healthy Food: ಈ ಎಲ್ಲ ರಾಸಾಯನಿಕಗಳು ನೀವು ತಿನ್ನುವ ಆಹಾರದಲ್ಲಿದೆಯೇ? ಹಾಗಾದರೆ ಎಚ್ಚರ!

Eating Food Packed In Newspaper: ನಿತ್ಯವೂ ದಿನಪತ್ರಿಕೆಯಲ್ಲಿ ಬಜ್ಜಿ ಬೋಂಡಾ ತಿನ್ನುತ್ತೀರಾ?; ಹಾಗಾದರೆ ಎಚ್ಚರ!

Benefits Of Tamarind: ಬಾಯಲ್ಲಿ ನೀರೂರಿಸುವ ಹುಣಸೆ ಹಣ್ಣಿನ ಲಾಭಗಳು ಗೊತ್ತೇ?