Marriage dokha : ಹುಡುಗ್ರೇ ಹುಷಾರ್.. ಮದುವೆಯಾಗಿ ಮೋಸ ಮಾಡ್ತಾಳಂತೆ ಈ ರೀಲ್ಸ್ ಸುಂದ್ರಿ!
Marriage Dokha : ರೀಲ್ಸ್ ರಾಣಿಯೊಬ್ಬಳ ಮೇಲೆ ಮದುವೆ ವಂಚನೆ ದೂರು ಕೇಳಿಬಂದಿದೆ. ಶಿವಮೊಗ್ಗದ ಈ ಹುಡುಗಿ ಒಬ್ಬ ಹುಡುಗನನ್ನು ಮದುವೆಯಾಗಿ ಕೆಲವೇ ತಿಂಗಳಲ್ಲಿ ಬಿಟ್ಟು ಹೋಗಿರುವ ಆಕೆಗೆ ಮೋಸ ಮಾಡುವ ಖಯಾಲಿ ಎಂದಿದ್ದಾನೆ ಹುಡುಗ.
ಶಿವಮೊಗ್ಗ: ಆಕೆ ಮೊದಲು ಟಿಕ್ ಟಾಕ್ ಸ್ಟಾರ್ ಆಗಿದ್ದಳು. ನಂತ್ರ ರೀಲ್ಸ್ ರಾಣಿಯಾದಳು (Reels Rani). ಹುಡುಗರ ಜತೆ ರೀಲ್ಸ್ ಮಾಡಿದಳು. ಒಂದೊಂದು ವಿಡಿಯೊಗೆ ಒಬ್ಬೊಬ್ಬ ಹುಡುಗರು ಅನ್ನೋ ತರ ಬದಲಾದರು. ಆದರೆ, ಈಗ ರಿಯಲ್ ಜೀವನದಲ್ಲೂ ಇದೇ ರೀತಿಯ ಆಟ ಆಡಲು ಮುಂದಾಗಿರುವ ಅರೋಪ ಎದುರಿಸುತ್ತಿದ್ದಾಳೆ (Marriage dokha). ಇದು ಮಲೆನಾಡಿನ ಸುಂದರಿಯ ಕಥೆ (Malnad Beauty).
ಹೊಸನಗರ ತಾಲೂಕಿನ ನಗರ ಸಮೀಪದ ಹೆಂಡೆಗದ್ದೆ ಗ್ರಾಮದ ಯುವತಿ ಸನ್ನಿಧಿಯ ಮೇಲೆ ಇಂಥಹುದೊಂದು ಆರೋಪ ಎದುರಾಗಿದೆ. ಆಕೆ ಶಿವಮೊಗ್ಗದಲ್ಲಿ ಮದುವೆಯಾಗಿ ಮೋಸ ಮಾಡಿದ್ದಾಳೆ ಎಂದು ಆಕೆಯ ಗಂಡನಾಗಿದ್ದವನು ಆರೋಪ ಮಾಡಿದ್ದಾನೆ. ಮಲೆನಾಡಿನ ಹುಡುಗರೇ ಎಚ್ಚರ.. ಈ ಹುಡುಗಿ ಹಣಕ್ಕಾಗಿ ಮದುವೆಯಾಗಿ ನಂತರ ಮೋಸ ಮಾಡ್ತಾಳೆ ಎಂದು ಆರೋಪಿಸಿದ್ದಾನೆ.
ಶಿವಮೊಗ್ಗ ನಗರ ಸಂಕೇತ್ ಎಂಬ ಯುವಕ ತನಗೆ ಸನ್ನಿಧಿಯಿಂದ ಮೋಸವಾಗಿದೆ ಎಂದು ಆರೋಪಿಸಿದ್ದಾನೆ. ಮದುವೆಯಾಗಿ ಕೆಲವು ದಿನವೂ ಸರಿಯಾಗಿ ಸಂಸಾರ ಮಾಡಿಲ್ಲ. ಈಗ ಬರೋಬ್ಬರಿ 20 ಲಕ್ಷ ರೂ. ಮೋಸ ಮಾಡಿದ್ದಾಳೆ ಎಂದು ಆರೋಪಿಸಿದ್ದಾನೆ.
ಸಂಕೇತ್ ಮತ್ತು ಸನ್ನಿಧಿಯ ಮದುವೆ 2023ರ ಫೆಬ್ರವರಿಯಲ್ಲಿ ನಡೆದಿತ್ತು. ಅಂದರೆ ಒಂದು ವರ್ಷದ ಹಿಂದೆ ಅವರಿಬ್ಬರು ಒಂದಾಗಿದ್ದರು. ಆದರೆ, ಅವರ ಖುಷಿಯ ದಿನಗಳು ಒಂದೆರಡು ತಿಂಗಳಿಗಷ್ಟೇ ಸೀಮಿತವಾಗಿತ್ತು. ಒಂದೆರಡು ತಿಂಗಳು ಸಂಸಾರ ಮಾಡಿ ಕೈ ಕೊಟ್ಟ ಈ ಸುಂದರಿ ನೀನು ಕೀಳು ಜಾತಿಯವನೆಂದು ಆರೋಪ ಮಾಡಿ ದೂರ ಮಾಡಿದ್ದಾಳಂತೆ. ಈಗ ಬೇರೊಬ್ಬ ಹುಡುಗನ ಜತೆ ಓಡಾಡುತ್ತಿದ್ದಾಳಂತೆ.
ಸಂಕೇತ್‌ನನ್ನು ಮದುವೆಯಾಗುವ ಮುನ್ನವೂ ಕೆಲವು ತಿಂಗಳ ಕಾಲ ಆಕೆ ಪ್ರೀತಿಸಿದ್ದಳು. ಪ್ರೀತಿ ಪ್ರೇಮ ಅಂತ ಅವನ ಬೆನ್ನುಬಿದ್ದಿದ್ದ ಆಕೆ ಸುಮಾರು 20 ಲಕ್ಷ ರೂ.ಯನ್ನು ಪಡೆದಿದ್ದಳಂತೆ. ಕೊನೆಗೆ ಮದುವೆಯೂ ಆಗಿದೆ. ಆದರೆ, ಜಾತಿ ಹೆಸರು ಹೇಳಿ ಜಾರಿಕೊಂಡಿದ್ದಾಳೆ ಎನ್ನುವುದು ಸಂಕೇತ್ ದೂರು.
First Published on Vistara News.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ