Stock Market: ಷೇರುಪೇಟೆ ತಲ್ಲಣ; ಹೂಡಿಕೆದಾರರಿಗೆ 7 ಲಕ್ಷ ಕೋಟಿ ರೂ. ನಷ್ಟ!

 Stock Market: ನಿಫ್ಟಿ 50166 ಅಂಕಗಳು ಅಥವಾ ಶೇ.0.76 ರಷ್ಟು ಕಡಿಮೆಯಾಗಿ 21,616.05ಕ್ಕೆ ಕೊನೆಗೊಂಡರೆ, ಸೆನ್ಸೆಕ್ಸ್ 523 ಪಾಯಿಂಟ್ ಅಥವಾ 0.73 ಶೇಕಡಾ ಕುಸಿದು 71,072.49 ಕ್ಕೆ ಅಂತ್ಯವಾಯಿತು.


ಮುಂಬೈ: ಭಾರತೀಯ ಷೇರು ಪೇಟೆ(India Stock Market) ಸೋಮವಾರ ತಲ್ಲಣಿಸಿದೆ. ನಿಫ್ಟಿ 50(Nifty 50), ಸೆನ್ಸೆಕ್ಸ್ (Sensex) ನಷ್ಟದೊಂದಿಗೆ ತಮ್ಮ ವ್ಯವಹಾರವನ್ನು ಅಂತ್ಯಗೊಳಿಸಿದೆ. ಹೂಡಿಕೆದಾರರಿಗೆ ಸುಮಾರು 7 ಲಕ್ಷ ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ನಿಫ್ಟಿ 50166 ಅಂಕಗಳು ಅಥವಾ ಶೇ.0.76 ರಷ್ಟು ಕಡಿಮೆಯಾಗಿ 21,616.05ಕ್ಕೆ ಕೊನೆಗೊಂಡರೆ, ಸೆನ್ಸೆಕ್ಸ್ 523 ಪಾಯಿಂಟ್ ಅಥವಾ 0.73 ಶೇಕಡಾ ಕುಸಿದು 71,072.49 ಕ್ಕೆ ಕೊನೆಗೊಂಡಿತು.

ಭಾರತದ ಗ್ರಾಹಕ ಬೆಲೆ ಸೂಚ್ಯಂಕ(CPI) ಆಧಾರಿತ ಹಣದುಬ್ಬರ ಅಥವಾ ಜನವರಿಯ ಹಣದುಬ್ಬರ ದರ ಮತ್ತು ಡಿಸೆಂಬರ್‌ನ ಕೈಗಾರಿಕಾ ಉತ್ಪಾದನೆಯ (IIP) ದತ್ತಾಂಶಗಳು ಇಂದು ಬಿಡುಗಡೆಯಾಗಲಿದ್ದು, ಷೇರು ಪೇಟೆ ಮೇಲೆ ಪರಿಣಾಮ ಬೀರಿದೆ. ಈ ಮಧ್ಯೆ, ಮಂಗಳವಾರ ಬಿಡುಗಡೆಯಾಗಲಿರುವ ಅಮೆರಿಕದ ಹಣದುಬ್ಬರ ಡೇಟಾಗಾಗಿ ಹೂಡಿಕೆದಾರರು ಕಾಯುತ್ತಿದ್ದಾರೆ. ಹಾಗೆಯೇ, ಬುಧವಾರ ಬ್ರಿಟಿಷ್ ಹಣದುಬ್ಬರ ಹಾಗೂ ಯುರೋಜೋನ್ ಜಿಡಿಪಿ ಅಂಕಿ ಅಂಶಗಳು ಹೊರ ಬೀಳಲಿವೆ.

ಅಮೆರಿಕವು ಬಡ್ಡಿದರ ಕಡಿತದ ಬಗ್ಗೆ ಸಮಯದ ನಿರೀಕ್ಷೆಯ ಹಿನ್ನೆಲೆಯಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ದೇಶಿ ಮಾರುಕಟ್ಟೆಯಲ್ಲಿ ಷೇರುಗಳನ್ನು ಮಾರಾಟ ಮಾಡಿದ್ದರಿಂದ ಪ್ರತಿಕೂಲ ಪರಿಣಾಮ ಬೀರಿತು. ನಿಫ್ಟಿ 50166 ಅಂಕಗಳು ಅಥವಾ ಶೇ.0.76 ರಷ್ಟು ಕಡಿಮೆಯಾಗಿ 21,616.05ಕ್ಕೆ ಕೊನೆಗೊಂಡರೆ, ಸೆನ್ಸೆಕ್ಸ್ 523 ಪಾಯಿಂಟ್ ಅಥವಾ 0.73 ಶೇಕಡಾ ಕುಸಿದು 71,072.49 ಕ್ಕೆ ಕೊನೆಗೊಂಡಿತು.

First Published on Vistara News.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Healthy Food: ಈ ಎಲ್ಲ ರಾಸಾಯನಿಕಗಳು ನೀವು ತಿನ್ನುವ ಆಹಾರದಲ್ಲಿದೆಯೇ? ಹಾಗಾದರೆ ಎಚ್ಚರ!

Eating Food Packed In Newspaper: ನಿತ್ಯವೂ ದಿನಪತ್ರಿಕೆಯಲ್ಲಿ ಬಜ್ಜಿ ಬೋಂಡಾ ತಿನ್ನುತ್ತೀರಾ?; ಹಾಗಾದರೆ ಎಚ್ಚರ!

Benefits Of Tamarind: ಬಾಯಲ್ಲಿ ನೀರೂರಿಸುವ ಹುಣಸೆ ಹಣ್ಣಿನ ಲಾಭಗಳು ಗೊತ್ತೇ?