Guava Benefits: ಸೀಬೆ ಹಣ್ಣು ಎಂಬ ʻಸೂಪರ್ ಫುಡ್ʼ; ಇದು ಔಷಧೀಯ ಗುಣಗಳ ಕಣಜ!
ಸೀಬೇಹಣ್ಣಿನಲ್ಲಿರುವಷ್ಟು ಔಷಧೀಯ ಗುಣಗಳು (guava benefits) ಬೇರಾವ ಹಣ್ಣುಗಳಲ್ಲೂ ಸಿಗಲಿಕ್ಕಿಲ್ಲ. ಈ ಹಣ್ಣಿನಲ್ಲಿ ಎಲ್ಲ ಬಗೆಯ ರೋಗಗಳಿಗೂ ಉತ್ತರವಿದೆ. ಜೊತೆಗೆ ಬ್ಯಾಕ್ಟೀರಿಯಾಗಳನ್ನು ದೇಹದಿಂದ ಹೊರಗಟ್ಟುವ ಸಾಮರ್ಥ್ಯವಿದೆ. ಪೇರಳೆ ಅಥವಾ ಸೀಬೇಹಣ್ಣು ಅಥವಾ ಚೇಪೇಕಾಯಿ ʻಹಣ್ಣುಗಳ ರಾಣಿʼ ಎಂಬುದು ನಿಮಗೆ ಗೊತ್ತೇ? ಹೌದು. ಸೀಬೇಹಣ್ಣಿನಲ್ಲಿರುವಷ್ಟು ಔಷಧೀಯ ಗುಣಗಳು ಬೇರಾವ ಹಣ್ಣುಗಳಲ್ಲೂ ಸಿಗಲಿಕ್ಕಿಲ್ಲ. ಈ ಹಣ್ಣಿನಲ್ಲಿ ಎಲ್ಲ ಬಗೆಯ ರೋಗಗಳಿಗೂ ಉತ್ತರವಿದೆ. ಜೊತೆಗೆ ಬ್ಯಾಕ್ಟೀರಿಯಾಗಳನ್ನು ದೇಹದಿಂದ ಹೊರಗಟ್ಟುವ ಸಾಮರ್ಥ್ಯವಿದೆ. ಇದರಲ್ಲಿರುವ ಪೋಷಕಾಂಶಗಳಿಗೆ, ಉರಿಯೂತಗಳು, ಋತುಗಳಿಗನುಸಾರವಾಗಿ ವಕ್ಕರಿಸುವ ಸಾಮಾನ್ಯ ರೋಗಗಳನ್ನು (guava benefits) ಬಡಿದಟ್ಟುವ ಗುಣವಿದೆ. ಅಷ್ಟೇ ಅಲ್ಲ, ಜೀರ್ಣಕ್ರಿಯೆ, ಹೃದಯದ ಆರೋಗ್ಯ, ಮಧುಮೇಹ ಹೀಗೆ ಹಲವು ಸಮಸ್ಯೆಗಳಿಗೆ ಪರಿಹಾರವಿದೆ. ಅದಕ್ಕೇ ಸೀಬೆ ಹಣ್ಣುಗಳ ರಾಣಿ! ಆದರೆ, ಸೀಬೆ ಹಣ್ಣನ್ನು ಕಂಡರೆ ನಮಗ್ಯಾಕೋ ಸದರ. ಮಾರುಕಟ್ಟೆಯಲ್ಲಿ ಯಾವು ಯಾವುದೋ ಊರುಗಳಿಂದ ಲಗ್ಗೆಯಿಡುವ ಥಳಥಳಿಸುವ ಸ್ಟಿಕ್ಕರ್ ಅಂಟಿಸಿ ಬರುವ ಹಣ್ಣುಗಳನ್ನು ತಿನ್ನುವ ನಾವು, ಮನೆಯಂಗಳದಲ್ಲೇ ಬೆಳವ, ಸ್ಥಳೀಯ ಹಣ್ಣಾದ ಸೀಬೆಯ ಬಗ್ಗೆ ನಿರ್ಲಕ್ಷ್ಯ ತಾಳುತ್ತೇವೆ. ಆದರೆ, ಸೀಬೆಯ ಗುಣಗಳನ್ನು ತಿಳಿದರೆ, ನಾವು ಯಾಕೆ ಈ ಹಣ್ಣನ್ನು ತಿನ್ನುವುದು ಅಗತ್ಯ ಎಂಬ ಮನವರಿಕೆಯಾದೀತು. ಬನ್ನಿ, ಸೀಬೆ ಹಣ್ಣಿನ ಅದ್ಭುತ ಲಾಭಗಳನ್ನು ತಿಳಿ...