ಪೋಸ್ಟ್‌ಗಳು

ಫೆಬ್ರವರಿ, 2024 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

UAE Temple Inauguration: ಅಬುಧಾಬಿಯಲ್ಲಿ ಪ್ರಧಾನಿ ಮೋದಿಯಿಂದ ಹಿಂದೂ ದೇಗುಲ ಉದ್ಘಾಟನೆಯ ಲೈವ್ ವಿಡಿಯೋ ಇಲ್ಲಿ ನೋಡಿ…

ಇಮೇಜ್
  UAE Temple Inauguration : ಅಬುಧಾಬಿಯಲ್ಲಿ ಮೊದಲ ನಿರ್ಮಾಣ ಮಾಡಲಾಗಿರುವ ಯುಎಇ ದೇಶದ ಮೊದಲ ಹಿಂದೂ ದೇಗುಲವನ್ನ ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟನೆ ಮಾಡುತ್ತಿದ್ದಾರೆ. ಅಬುಧಾಬಿ:  ಯುಎಇ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಅಬುಧಾಬಿಯಲ್ಲಿ ನಿರ್ಮಾಣ ಮಾಡಲಾಗಿರುವ ಹಿಂದೂ ದೇವಾಲಯವನ್ನು (Hindu Temple) ಉದ್ಘಾಟನೆ ಮಾಡಲಿದ್ದಾರೆ( UAE Temple Inauguration ). ಓದುಗರು ಬಿಎಪಿಎಸ್ ಹಿಂದೂ ಮಂದಿರ ಉದ್ಘಾಟನೆಯ ಲೈವ್ ವಿಡಿಯೋವನ್ನು ಇಲ್ಲಿ ನೋಡಬಹುದು. ಅಬುಧಾಬಿಯಲ್ಲಿ ಬೋಚಾಸನವಾಸಿ ಅಕ್ಷರ ಪುರುಷೋತ್ತಮ ಸಂಸ್ಥಾ (BAPS) ಮಂದಿರವನ್ನು ನಿರ್ಮಿಸಲಾಗಿದ್ದು, ಇದು ಯುಎಇ ಮೊದಲ ಹಿಂದು ದೇವಾಲಯ ಎನಿಸಿದೆ. ರಾಜಸ್ಥಾನದ ಮಕ್ರಾನ ಗ್ರಾಮದ ಶಿಲ್ಪಿಗಳು, ಕುಶಲಕರ್ಮಿಗಳು ಯುಎಇ ಹಿಂದು ದೇವಾಲಯದ ವಾಸ್ತುಶಿಲ್ಪಕ್ಕೆ, ಮೂರ್ತಿಗಳ ಕೆತ್ತನೆಗೆ ಹೆಚ್ಚಿನ ಕೊಡುಗೆ ನೀಡಿದ್ದಾರೆ. ಕಳೆದ ಐದು ವರ್ಷದಲ್ಲಿ ಇವರು ರಾಮ, ಕೃಷ್ಣನ ಮೂರ್ತಿಗಳು, ದೇವಾಲಯದ ಕಂಬಗಳು, ಶಿಖರಗಳು, ಕಲಾಕೃತಿಗಳನ್ನು ಕೆತ್ತುವ ಮೂಲಕ ದೇವಸ್ಥಾನದ ಸೌಂದರ್ಯವನ್ನು ಹೆಚ್ಚಿಸಿದ್ದಾರೆ. 2019ರಲ್ಲಿ ದೇವಾಲಯ ನಿರ್ಮಾಣ ಆರಂಭವಾಗಿದ್ದು, ಇಷ್ಟೂ ವರ್ಷಗಳಲ್ಲಿ ರಾಜಸ್ಥಾನದ ಕಲಾವಿದರು ಅವಿರತವಾಗಿ ಶ್ರಮಿಸಿ, ಶಿಲ್ಪಕಲೆಯ ಮೆರುಗನ್ನು ಹೆಚ್ಚಿಸಿದ್ದಾರೆ. First Published on Vistara News .

Bellary News: ಬಳ್ಳಾರಿಯ ಚರಂಡಿಯಲ್ಲಿ 2 ದಿನದ ನವಜಾತ ಶಿಶು ಮೃತ ದೇಹ ಪತ್ತೆ

ಇಮೇಜ್
  Bellary News : ಬಳ್ಳಾರಿಯ ರಾಜ್ಯೋತ್ಸವ ನಗರದ ರಸ್ತೆ ಬದಿಯ ಚರಂಡಿಯಲ್ಲಿ ನವಜಾತ ಶಿಶುವಿನ ಮೃತ ದೇಹ ಪತ್ತೆಯಾಗಿದೆ. ಬಳ್ಳಾರಿ:  ಬಳ್ಳಾರಿಯಲ್ಲಿ ಎರಡು ದಿನದ ನವಜಾತ ಶಿಶು ಮೃತ ದೇಹ ಪತ್ತೆಯಾಗಿದೆ. ನಗರದ (Bellary News ) ರಾಜ್ಯೋತ್ಸವ ನಗರದ ರಸ್ತೆ ಬದಿ ಚರಂಡಿಯಲ್ಲಿ ನವಜಾತ ಶಿಶುವಿನ ಮೃತ ದೇಹ ಸಿಕ್ಕಿದೆ. 2 ದಿನದ ಹಿಂದೆ ಜನಿಸಿದ ಗಂಡು ಶಿಶುವನ್ನು ಚರಂಡಿಗೆ ಎಸೆಯಲಾಗಿದ್ದು, ಮಗುವಿನ ಪೋಷಕರು ಪತ್ತೆಯಾಗಿಲ್ಲ. ಸ್ಥಳೀಯರು ಶಿಶುವಿನ ಮೃತದೇಹ ಹೊರತೆಗೆದಿದ್ದು, ಸ್ಥಳಕ್ಕೆ ಬ್ರೂಸ್ ಪೇಟ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. First Published on Vistara News .

Marriage dokha : ಹುಡುಗ್ರೇ ಹುಷಾರ್‌.. ಮದುವೆಯಾಗಿ ಮೋಸ ಮಾಡ್ತಾಳಂತೆ ಈ ರೀಲ್ಸ್‌ ಸುಂದ್ರಿ!

ಇಮೇಜ್
  Marriage Dokha : ರೀಲ್ಸ್‌ ರಾಣಿಯೊಬ್ಬಳ ಮೇಲೆ ಮದುವೆ ವಂಚನೆ ದೂರು ಕೇಳಿಬಂದಿದೆ. ಶಿವಮೊಗ್ಗದ ಈ ಹುಡುಗಿ ಒಬ್ಬ ಹುಡುಗನನ್ನು ಮದುವೆಯಾಗಿ ಕೆಲವೇ ತಿಂಗಳಲ್ಲಿ ಬಿಟ್ಟು ಹೋಗಿರುವ ಆಕೆಗೆ ಮೋಸ ಮಾಡುವ ಖಯಾಲಿ ಎಂದಿದ್ದಾನೆ ಹುಡುಗ. ಶಿವಮೊಗ್ಗ:  ಆಕೆ ಮೊದಲು ಟಿಕ್‌ ಟಾಕ್‌ ಸ್ಟಾರ್‌ ಆಗಿದ್ದಳು. ನಂತ್ರ ರೀಲ್ಸ್‌ ರಾಣಿಯಾದಳು (Reels Rani). ಹುಡುಗರ ಜತೆ ರೀಲ್ಸ್‌ ಮಾಡಿದಳು. ಒಂದೊಂದು ವಿಡಿಯೊಗೆ ಒಬ್ಬೊಬ್ಬ ಹುಡುಗರು ಅನ್ನೋ ತರ ಬದಲಾದರು. ಆದರೆ, ಈಗ ರಿಯಲ್‌ ಜೀವನದಲ್ಲೂ ಇದೇ ರೀತಿಯ ಆಟ ಆಡಲು ಮುಂದಾಗಿರುವ ಅರೋಪ ಎದುರಿಸುತ್ತಿದ್ದಾಳೆ ( Marriage dokha ). ಇದು ಮಲೆನಾಡಿನ ಸುಂದರಿಯ ಕಥೆ (Malnad Beauty). ಹೊಸನಗರ ತಾಲೂಕಿನ ನಗರ ಸಮೀಪದ ಹೆಂಡೆಗದ್ದೆ ಗ್ರಾಮದ ಯುವತಿ ಸನ್ನಿಧಿಯ ಮೇಲೆ ಇಂಥಹುದೊಂದು ಆರೋಪ ಎದುರಾಗಿದೆ. ಆಕೆ ಶಿವಮೊಗ್ಗದಲ್ಲಿ ಮದುವೆಯಾಗಿ ಮೋಸ ಮಾಡಿದ್ದಾಳೆ ಎಂದು ಆಕೆಯ ಗಂಡನಾಗಿದ್ದವನು ಆರೋಪ ಮಾಡಿದ್ದಾನೆ. ಮಲೆನಾಡಿನ ಹುಡುಗರೇ ಎಚ್ಚರ.. ಈ ಹುಡುಗಿ ಹಣಕ್ಕಾಗಿ ಮದುವೆಯಾಗಿ ನಂತರ ಮೋಸ ಮಾಡ್ತಾಳೆ ಎಂದು ಆರೋಪಿಸಿದ್ದಾನೆ. ಶಿವಮೊಗ್ಗ ನಗರ ಸಂಕೇತ್ ಎಂಬ ಯುವಕ ತನಗೆ ಸನ್ನಿಧಿಯಿಂದ ಮೋಸವಾಗಿದೆ ಎಂದು ಆರೋಪಿಸಿದ್ದಾನೆ. ಮದುವೆಯಾಗಿ ಕೆಲವು ದಿನವೂ ಸರಿಯಾಗಿ ಸಂಸಾರ ಮಾಡಿಲ್ಲ. ಈಗ ಬರೋಬ್ಬರಿ 20 ಲಕ್ಷ ರೂ. ಮೋಸ ಮಾಡಿದ್ದಾಳೆ ಎಂದು ಆರೋಪಿಸಿದ್ದಾನೆ. ಸಂಕೇತ್‌ ಮತ್ತು ಸನ್ನಿಧಿಯ ಮದುವೆ 2023ರ ಫೆಬ್ರವರಿಯಲ್ಲಿ...

Infosys Narayanamurty : ಮಗಳು ಅಕ್ಷತಾ ಜತೆ ಶಾಪ್‌ಗೆ ಬಂದು ಐಸ್‌ ಕ್ರೀಂ ಸವಿದ ಇನ್ಫಿ ನಾರಾಯಣ ಮೂರ್ತಿ

ಇಮೇಜ್
  Infosys Narayanamurty : ಜಯನಗರದ ಐಸ್‌ ಕ್ರೀಂ ಜಾಯಿಂಟ್‌ಗೆ ಬಂದು ಕುಳಿತಿದ್ದ ಆ ಅಪ್ಪ-ಮಗಳ ಜೋಡಿ ಎಲ್ಲರ ಗಮನ ಸೆಳೆದಿತ್ತು. ಸದಾ ಸರಳತೆಯನ್ನೇ ಪ್ರದರ್ಶಿಸುವ ಅವರ ಸೌಜನ್ಯಕ್ಕೆ ಈಗ ಎಲ್ಲ ಕಡೆ ಪ್ರಶಂಸೆಯ ಮಾತುಗಳು ಕೇಳಿಬರುತ್ತಿವೆ. ಬೆಂಗಳೂರು:  ಎರಡು ದಿನದ ಹಿಂದೆ ಜಯನಗರದ ಜನಪ್ರಿಯ ಐಸ್‌ ಕ್ರೀಂ ಶಾಪ್‌ ಐಕಾನಿಕ್‌ ಕಾರ್ನರ್‌ (Ice Cream Corner Jayanagara) ಹೌಸ್‌ಗೆ ಇಬ್ಬರು ಅಪರೂಪದ ಅತಿಥಿಗಳು ಬಂದಿದ್ದರು. ಸೀದಾ ಸಾದಾ ದಿರಸಿನಲ್ಲಿದ್ದ ಅಪ್ಪ ಮತ್ತು ಮಗಳು ಆರಾಮವಾಗಿ ಕುಳಿತು ಐಸ್‌ ಕ್ರೀಂ ಸವಿದರು (Ice cream). ಆಗ ಕೆಲವರು ಯಾರಪ್ಪಾ ಇವರು ಅಂತ ಕುತೂಹಲದಿಂದ ನೋಡಿದರು. ಕೆಲವರು ಯಾರೋ ಅಪ್ಪ-ಮಗಳು ಬಂದಿದ್ದಾರೆ ಅಂದುಕೊಂಡು ಸುಮ್ಮನಾದರು. ಅಂದ ಹಾಗೆ ಆವತ್ತು ಅಲ್ಲಿಗೆ ಬಂದಿದ್ದರು ಸಾಮಾನ್ಯದವರಂತೂ ಅಲ್ಲ. ಒಬ್ಬರು ಜಗತ್ತಿನ ಅತಿ ದೊಡ್ಡ ಐಟಿ ಕಂಪನಿಗಳಲ್ಲಿ ಒಂದರ ಸ್ಥಾಪಕರು. ಇನ್ನೊಬ್ಬರು ಬ್ರಿಟನ್‌ ಪ್ರಧಾನಿಯ ಪತ್ನಿ. ಹೌದು, ಅವರೇ ಇನ್ಫೋಸಿಸ್‌ನ ಎನ್‌.ಆರ್‌. ನಾರಾಯಣಮೂರ್ತಿ (Infosys Narayanamurty) ಮತ್ತು ಅವರ ಮಗಳು ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌ ಅವರ ಪತ್ನಿ ಅಕ್ಷತಾ ಮೂರ್ತಿ ( Akshatha Murthy ) ನಾರಾಯಣಮೂರ್ತಿ ಮತ್ತು ಸುಧಾ ಮೂರ್ತಿ ದಂಪತಿ ಈಗ ಪರಮ ಶ್ರೀಮಂತರೇ ಆಗಿದ್ದರೂ ತಾವು ಬೆಳೆದು ಬಂದ ದಾರಿಯನ್ನು ಎಂದೂ ಮರೆತಿಲ್ಲ. ಹೀಗಾಗಿ ಸದಾ ಸರಳ ಜೀವನವನ್ನೇ ನಡೆಸುತ್ತಿದ್ದಾರೆ. ಇದೇ ಹವ್...

Stock Market: ಷೇರುಪೇಟೆ ತಲ್ಲಣ; ಹೂಡಿಕೆದಾರರಿಗೆ 7 ಲಕ್ಷ ಕೋಟಿ ರೂ. ನಷ್ಟ!

ಇಮೇಜ್
  Stock Market : ನಿಫ್ಟಿ 50166 ಅಂಕಗಳು ಅಥವಾ ಶೇ.0.76 ರಷ್ಟು ಕಡಿಮೆಯಾಗಿ 21,616.05ಕ್ಕೆ ಕೊನೆಗೊಂಡರೆ, ಸೆನ್ಸೆಕ್ಸ್ 523 ಪಾಯಿಂಟ್ ಅಥವಾ 0.73 ಶೇಕಡಾ ಕುಸಿದು 71,072.49 ಕ್ಕೆ ಅಂತ್ಯವಾಯಿತು. ಮುಂಬೈ:  ಭಾರತೀಯ ಷೇರು ಪೇಟೆ( India Stock Market ) ಸೋಮವಾರ ತಲ್ಲಣಿಸಿದೆ. ನಿಫ್ಟಿ 50(Nifty 50), ಸೆನ್ಸೆಕ್ಸ್ (Sensex) ನಷ್ಟದೊಂದಿಗೆ ತಮ್ಮ ವ್ಯವಹಾರವನ್ನು ಅಂತ್ಯಗೊಳಿಸಿದೆ. ಹೂಡಿಕೆದಾರರಿಗೆ ಸುಮಾರು 7 ಲಕ್ಷ ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ನಿಫ್ಟಿ 50166 ಅಂಕಗಳು ಅಥವಾ ಶೇ.0.76 ರಷ್ಟು ಕಡಿಮೆಯಾಗಿ 21,616.05ಕ್ಕೆ ಕೊನೆಗೊಂಡರೆ, ಸೆನ್ಸೆಕ್ಸ್ 523 ಪಾಯಿಂಟ್ ಅಥವಾ 0.73 ಶೇಕಡಾ ಕುಸಿದು 71,072.49 ಕ್ಕೆ ಕೊನೆಗೊಂಡಿತು. ಭಾರತದ ಗ್ರಾಹಕ ಬೆಲೆ ಸೂಚ್ಯಂಕ(CPI) ಆಧಾರಿತ ಹಣದುಬ್ಬರ ಅಥವಾ ಜನವರಿಯ ಹಣದುಬ್ಬರ ದರ ಮತ್ತು ಡಿಸೆಂಬರ್‌ನ ಕೈಗಾರಿಕಾ ಉತ್ಪಾದನೆಯ (IIP) ದತ್ತಾಂಶಗಳು ಇಂದು ಬಿಡುಗಡೆಯಾಗಲಿದ್ದು, ಷೇರು ಪೇಟೆ ಮೇಲೆ ಪರಿಣಾಮ ಬೀರಿದೆ. ಈ ಮಧ್ಯೆ, ಮಂಗಳವಾರ ಬಿಡುಗಡೆಯಾಗಲಿರುವ ಅಮೆರಿಕದ ಹಣದುಬ್ಬರ ಡೇಟಾಗಾಗಿ ಹೂಡಿಕೆದಾರರು ಕಾಯುತ್ತಿದ್ದಾರೆ. ಹಾಗೆಯೇ, ಬುಧವಾರ ಬ್ರಿಟಿಷ್ ಹಣದುಬ್ಬರ ಹಾಗೂ ಯುರೋಜೋನ್ ಜಿಡಿಪಿ ಅಂಕಿ ಅಂಶಗಳು ಹೊರ ಬೀಳಲಿವೆ. ಅಮೆರಿಕವು ಬಡ್ಡಿದರ ಕಡಿತದ ಬಗ್ಗೆ ಸಮಯದ ನಿರೀಕ್ಷೆಯ ಹಿನ್ನೆಲೆಯಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ದೇಶಿ ಮಾರುಕಟ್ಟೆಯಲ್ಲಿ ಷೇರು...