Weight Loss Tips: ಹೊಟ್ಟೆಯ ಹಠಮಾರಿ ಬೊಜ್ಜು ಕರಗಿಸಬೇಕೇ? ಹಸಿ ಬೆಳ್ಳುಳ್ಳಿಯಲ್ಲಿದೆ ಇದಕ್ಕೆ ಪರಿಹಾರ!
ನೈಸರ್ಗಿಕವಾಗಿ ಹೊಟ್ಟೆ ಕರಗಿಸುವ ತಂತ್ರಗಳಲ್ಲಿ (weight loss tips) ಪ್ರಮುಖವಾದುದು ಎಂದು ಬೆಳ್ಳುಳ್ಳಿಯ ಬಳಕೆ (garlic uses). ಅದು ಹೇಗೆ? ಬನ್ನಿ ನೋಡೋಣ. ಏನೇ ಮಾಡಿದರೂ ಹೊಟ್ಟೆ ಮಾತ್ರ ಕರಗುತ್ತಿಲ್ಲ ಎಂಬುದು ಕೆಲವರ ಅಳಲು. ದಿನವೂ ನಿಂಬೆರಸ ಜೇನುತುಪ್ಪ ಹಾಕಿದ ಬಿಸಿನೀರು ಬೆಳಗ್ಗೆದ್ದ ಕೂಡಲೇ ಹೀರಿದ್ದಾಯಿತು. ಇನ್ನೇನೋ ಜ್ಯೂಸುಗಳನ್ನು ಮಾಡಿ ಕುಡಿದಿದ್ದಾಯಿತು. ವ್ಯಾಯಾಮ, ನಡಿಗೆ ಎಲ್ಲವೂ ಮಾಡಲಾಗುತ್ತಿದೆ. ಆದರೂ ಹೊಟ್ಟೆ ಮಾತ್ರ ಹಾಗೆಯೇ ಇದೆ. ಒಂದಿಂಚೂ ಅಲುಗಾಡಿಲ್ಲ (weight loss guide) ಎಂಬುದು ಬಹುತೇಕರ ಗೋಳು. ನೈಸರ್ಗಿಕವಾಗಿರಬೇಕು, ಸುಲಭವೂ ಆಗಿರಬೇಕು (weight loss tips), ಆದರೆ, ಹೊಟ್ಟೆ ಮಾತ್ರ ಕರಗಿಸಬೇಕು ಎಂದುಕೊಳ್ಳುವ ಮಂದಿಗೆ ಇಲ್ಲೊಂದು ಮನೆಮದ್ದಿದೆ. ಅದು ಬೆಳ್ಳುಳ್ಳಿ! ಬೆಳ್ಳುಳ್ಳಿಯ ವಾಸನೆ ಎಂದು ಮಾರು ದೂರ ಓಡುವ ಮಂದಿಗೆ ಇದು ಕಷ್ಟಸಾಧ್ಯವಾದರೂ, ನಾವು ಮನಸ್ಸು ಮಾಡಿದರೆ ಬೆಳ್ಳುಳ್ಳಿಯ ಏಕೈಕ ಪರಿಶ್ರಮದಿಂದ (garlic benefits, garlic uses) ಇದು ಸಾಧ್ಯವಾಗುತ್ತದೆ. ಆದರೆ, ಹಸಿ ಬೆಳ್ಳುಳ್ಳಿ ತಿನ್ನುವ ಪರಿಶ್ರಮ ಮಾತ್ರ ನಾವು ತೆಗೆದುಕೊಳ್ಳಬೇಕು ಅಷ್ಟೇ. ಸಂಶೋಧನೆಗಳ ಪ್ರಕಾರ, ಬೆಳ್ಳುಳ್ಳಿಯಲ್ಲಿ ಸಲ್ಫರ್ ಅಂಶವು ಹೇರಳವಾಗಿದ್ದು ಇದು ದೇಹದಲ್ಲಿರುವ ವಿಷಕಾರಕಗಳನ್ನು ಹೊರಹಾಕಿ ಜೀರ್ಣಕ್ರಿಯೆಯನ್ನು ಸರಾಗಗೊಳಿಸುತ್ತದೆ. ಇದರಲ್ಲಿ ಕೊಬ್ಬು ಕರಗಿಸುವ ಗುಣವೂ (garlic for weight loss) ಇರುವು...